Recent Posts

ದುಡಿಮೆ ಮತ್ತು ಆರ್ಥಿಕ ಜೀವನ - ೧೦ ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು


ದುಡಿಮೆ ಮತ್ತು ಆರ್ಥಿಕ ಜೀವನ

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

1. ಪ್ಲೇಟೋ ಅವರು ಬರೆದ ಗ್ರಂಥ ಯಾವುದು?,
‘ದಿ ರಿಪಬ್ಲಿಕ್’

2.“ಮಾನವ ಸಮಾಜವು ಸ್ವಾಭಾವಿಕ ಅಸಮಾನತೆಗಳಿಂದ ರೂಪಗೊಳ್ಳುತ್ತದೆ. ಈ ಸ್ವಾಭಾವಿಕ ಅಸಮಾನತೆಯು ಶ್ರಮ ವಿಭಜನೆಯಿಂದ ಕೂಡಿರುತ್ತದೆ” ಎಂದು ಹೇಳಿದವರು ಯಾರು?
ಪ್ಲೇಟೋ

3. ‘ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ’ ಎಂದು ಹೇಳಿದವರು ಯಾರು?
ಕಾರ್ಲ್ ಮಾರ್ಕ್ಸ್

4.ದುಡಿಮೆ ಎಂದರೇನು?
ದುಡಿಮೆ ಎಂದರೆ ಒಬ್ಬ ವ್ಯಕ್ತಿ ದೈಹಿಕ ಪರಿಶ್ರಮದಿಂದ ಅಥವಾ ಬೌದ್ಧಿಕ ಪರಿಶ್ರಮದಿಂದ ಆದಾಯ ಅಥವಾ ವಸ್ತುರೂಪದ ಪ್ರತಿಫಲವನ್ನು ಪಡೆಯುವುದು ಎಂದರ್ಥ.

5. ದುಡಿಮೆಯಲ್ಲಿ ಅಸಮಾನತೆ ಎಂದರೇನು?
ಸಮಾನ ಕೆಲಸಕ್ಕೆ ಸಮಾನ ವೇತನದ ನಿಯಮಕ್ಕೆ ವಿರುದ್ಧವಾಗಿ ನಡೆಯುವ ದುಡಿಮೆಯನ್ನು ದುಡಿಮೆಯಲ್ಲಿ ಅಸಮಾನತೆ ಎಂದು ಕರೆಯುವರು,

6. ಶ್ರಮ ವಿಭಜನೆ ಎಂದರೇನು?
ಒಂದು ಸಮಾಜಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಮತ್ತು ವಸ್ತು-ಪದಾರ್ಥಗಳನ್ನು ಬೇರೆ ಬೇರೆ ವರ್ಗಗಳ ದುಡಿಯುವ ಜನರು ಪೂರೈಸುವುದನ್ನು ಶ್ರಮ ವಿಭಜನೆ ಎನ್ನುವರು.

7. ಸಂಭಾವನೆ ಸಹಿತ ದುಡಿಮೆ ಎಂದರೇನು?
ನಿಗದಿತ ವೇತನವನ್ನು ಘಂಟೆಗಳ ಆಧಾರದಲ್ಲಿ, ದಿನಗೂಲಿಯ ಆಧಾರದಲ್ಲಿ, ವಾರದ ಆಧಾರದಲ್ಲಿ ಅಥವಾ ತಿಂಗಳ ಆಧಾರದಲ್ಲಿ ದೈಹಿಕ ಶ್ರಮಕ್ಕೆ, ವ್ಯಕ್ತಿಯ ಆರೆಕುಶಲ ಕೆಲಸಕ್ಕೆ ಅಥವಾ ಕುಶಲ ಕೆಲಸಕ್ಕೆ ನೀಡುವ ವೇತನವನ್ನು ಸಂಭಾವನೆ ಸಹಿತ ದುಡಿಮೆ ಎನ್ನುವರು.

8. ಸಂಭಾವನೆ ರಹಿತ ದುಡಿಮೆ ಎಂದರೇನು?
ಒಬ್ಬರ ದುಡಿಮೆಗೆ ಪ್ರತಿಯಾಗಿ ಯಾವುದೇ ರೀತಿಯ ಸಂಭಾವನೆ ಅಥವಾ ವಸ್ತುಗಳ ರೂಪದಲ್ಲಿ, ಯಾವುದೇ ಪ್ರತಿಫಲ ಇಲ್ಲದೇ ದುಡಿಮೆಯ ಚಟುವಟಿಕೆಗೆ ಸಂಭಾವನೆ ರಹಿತ ದುಡಿಮೆ ಎಂದು ಕರೆಯಲಾಗುತ್ತದೆ.

9, ಸಂಘಟಿತ ದುಡಿಮೆಯ ವಲಯ ಎಂದರೇನು?
ಯಾವ ವಲಯವು ಸರ್ಕಾರದಲ್ಲಿ ನೋಂದಣಿಯಾಗಿ ಕಾನೂನಿನ ಚೌಕಟ್ಟಿನೊಳಗೆ, ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸ, ಉದ್ಯೋಗ ಭರವಸೆ, ನಿಗದಿತ ವೇತನವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ನಿಗದಿಯಾಗಿರುತ್ತದೆಯೋ ಅದನ್ನು ಸಂಘಟಿತ ದುಡಿಮೆಯ ವಲಯವೆಂದು ಕರೆಯಲಾಗುತ್ತದೆ.

10. ಅಸಂಘಟಿತ ದುಡಿಮೆಯ ವಲಯ ಎಂದರೇನು?
ಅಸಂಘಟಿತ ವಲಯವೆಂದರೆ ದುಡಿಮೆಗೆ ಸಂಬಂಧಿಸಿದಂತೆ ಯಾವುದೇ ಕಾನೂನಿನ ಚೌಕಟ್ಟು ಇಲ್ಲದಿರುವುದು.

11. ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಜನರ ದುಡಿಮೆಯ ಕುರಿತು ಸಂಶೋಧನೆ ಮಾಡಿರುವ ಪುಸ್ತಕ ಯಾವುದು?
ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಜನರ ದುಡಿಮೆಯ ಕುರಿತು ಸಂಶೋಧನೆ ಮಾಡಿರುವ

III. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಸಂಘಟಿತ ದುಡಿಮೆಯ ಪ್ರಕಾರಗಳಾವುವು? ತಿಳಿಸಿ,
ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು, ಸರ್ಕಾರಗಳ ಆಡಳಿತ ಸೇವೆಗಳು, ವಾಣಿಜ್ಯ ಬ್ಯಾಂಕುಗಳು, ಜೀವ ವಿಮಾ ಕಂಪನಿಗಳು, ಸೈನ್ಯ

2. ದುಡಿಮೆಯ ತಾರತಮ್ಯತೆಯನ್ನು ವಿವರಿಸಿ.
ಸಮಾನ ಕೆಲಸಕ್ಕೆ ಸಮಾನ ವೇತನದ ನಿಯಮಕ್ಕೆ ವಿರುದ್ಧವಾಗಿ ನಡೆಯುವ ದುಡಿಮೆಯನ್ನು ದುಡಿಮೆಯಲ್ಲಿ ಅಸಮಾನತೆ ಎಂದು ಕರೆಯಬಹುದು.
ಇಬ್ಬರು ವ್ಯಕ್ತಿಗಳು ಒಂದೇ ಕೆಲಸವನ್ನು ಒಂದೇ ಸಮಯದಲ್ಲಿ ಮಾಡಿದಾಗ ಒಬ್ಬರಿಗೆ ಹೆಚ್ಚು ವೇತನವನ್ನು ಮತ್ತೊಬ್ಬರಿಗೆ ಕಡಿಮೆ ವೇತನವನ್ನು ನೀಡುವುದನ್ನು ದುಡಿಮೆಯಲ್ಲಿನ ಭೇದಭಾವ/ಅಸಮಾನತೆ ದುಡಿಮೆಯಲ್ಲಿ ಅಸಮಾನತೆ ಎನ್ನಬಹುದು.
ಮಹಿಳೆ ಮತ್ತು ಪುರುಷರಿಬ್ಬರೂ ಒಂದು ದುಡಿಮೆಯಲ್ಲಿ ತೊಡಗಿದರೂ ಅವರಿಗೆ ದೊರಕುವ ಸಂಭಾವನೆ ಸಮಾನವಾಗಿರುವುದಿಲ್ಲ.
ಭಾರತದಲ್ಲಿ ಪುರುಷರಿಗೆ ಉತ್ತಮ ಸ್ವರೂಪದ ಉದ್ಯೋಗಗಳನ್ನು ನೀಡಲಾಗುತ್ತಿದೆ.
ಹಾಗೆಯೇ ಹೆಚ್ಚಿನ ಸಂಭಾವನೆಗಳನ್ನು ನೀಡಲಾಗುತ್ತದೆ.
ಆದರೆ ಮಹಿಳೆಯರಿಗೆ ಕಡಿಮೆ ಸಂಬಳವನ್ನು ನೀಡಲಾಗುತ್ತಿದೆ.

3. ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ನಡುವಿನ ವ್ಯತ್ಯಾಸಗಳೇನು?
ಸಂಘಟಿತ ಕೆಲಸಗಾರರು :
ಸಂಘಟಿತ ವಲಯವೆಂದರೆ ದುಡಿಮೆಗೆ ಚೌಕಟ್ಟು ಇರುವುದು.
ಸಂಬಂಧಿಸಿದಂತೆ ಯಾವುದೇ ಕಾನೂನಿನ
ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸ ಉದ್ಯೋಗ ಭರವಸೆ, ನಿಗದಿತ ವೇತನ ಇರುವುದು
ಸಂಘಟಿತ ವಲಯದಲ್ಲಿ ಉದ್ಯೋಗ ಭದ್ರತೆಯ ಜೊತೆಗೆ, ಅನೇಕ ಕಾನೂನಿನ ಚೌಕಟ್ಟುಗಳಿರುತ್ತವೆ.
ಶಾಲೆಗಳು, ಆಸ್ಪತ್ರೆಗಳು, ಕೈಗಾರಿಕೆಗಳು, ಸರ್ಕರಗಳ ಆಡಳಿತ ಸೇವೆಗಳು, ವಾಣಿಜ್ಯ ಬ್ಯಾಂಕುಗಳು, ಜೀವ ವಿಮಾ ಕಂಪನಿಗಳು,
ವೈದ್ಯಕೀಯ ಸೌಲಭ್ಯಗಳಾಗಲಿ, ವಿಶೇಷ ಭತ್ಯೆಗಳಾಗಲಿ ಇರುವುದು
ಕನಿಷ್ಠ ವೇತನ ಕಾಯಿದೆ, ಕಾರ್ಖಾನೆಗಳ ಕಾಯಿದೆ, ವಿಶೇಷ ಭತ್ಯೆಗಳ ಕಾಯಿದೆ, ಪ್ರಾವಿಡೆಂಟ್ ಫಂಡ್ (ಪಿ.ಎಫ್) ಕಾಯಿದೆಗಳು ಇಲ್ಲಿ ಕಡ್ಡಾಯ
ಅಸಂಘಟಿತ ಕೆಲಸಗಾರರು :
ಅಸಂಘಟಿತ ವಲಯವೆಂದರೆ ದುಡಿಮೆಗೆ
ಸಂಬಂಧಿಸಿದಂತೆ ಯಾವುದೇ ಕಾನೂನಿನ ಚೌಕಟ್ಟು ಇಲ್ಲದಿರುವುದು.
ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸ,
ಉದ್ಯೋಗ ಭರವಸೆ, ನಿಗದಿತ ವೇತನ ಇಲ್ಲದಿರುವುದು
ಸಂಘಟಿತ ದುಡಿಮೆಯ ವಲಯದಲ್ಲಿ ಉದ್ಯೋಗ ಭದ್ರತೆಯ ಮತ್ತು ಕಾನೂನಿನ ಚೌಕಟ್ಟುಗಳಿರುವುದಿಲ್ಲ
ಮೋಟಾರ್ ವಾಹನ ರಿಪೇರಿ, ತಲೆಯ ಮೇಲೆ ಮತ್ತು ತಳ್ಳುವ ಗಾಡಿಯ ಮೂಲಕ ತರಕಾರಿ, ಮೀನು ಇತ್ಯಾದಿ ವಸ್ತುಗಳನ್ನು ಮಾರುವುದು, ಟೈಯರ್ ಪಂಚ, ಸೈಕಲ್ ರಿಪೇರಿ
ವೈದ್ಯಕೀಯ ಸೌಲಭ್ಯಗಳಾಗಲಿ, ವಿಶೇಷ ಭತ್ಯೆಗಳಾಗಲಿ ಇರುವುದಿಲ್ಲ
ಕನಿಷ್ಠ ವೇತನ ಕಾಯಿದೆ, ಕಾರ್ಖಾನೆಗಳ ಕಾಯಿದೆ, ವಿಶೇಷ ಭತ್ಯೆಗಳ ಕಾಯಿದೆ, ಇಲ್ಲಿ ಕಡ್ಡಾಯವಲ್ಲ.
ಪ್ರಾವಿಡೆಂಟ್ ಫಂಡ್ (ಪಿ.ಎಫ್) ಕಾಯಿದೆಗಳು
ಇವರ ದುಡಿಮೆಗೆ ರಜೆಯೇ ಇರುವುದಿಲ್ಲ.

4. ಅಸಂಘಟಿತ ದುಡಿಮೆಗಾರರು ಎದುರಿಸುತ್ತಿರುವ ಸಾಮಾಜಿಕ ಭದ್ರತೆಯ ಸವಾಲುಗಳನ್ನು ವಿವರಿಸಿ,
ಅಸಂಘಟಿತ ವಲಯದ ದುಡಿಮೆಗಾರರು ಸಾಮಾಜಿಕ ಅಭದ್ರತೆಯನ್ನು ಎದುರಿಸುತ್ತಿದ್ದಾರೆ.
ಸಾಮಾಜಿಕ ಭದ್ರತೆ ಎಂದರೆ ಮಾನವನಿಗೆ ಬದುಕಲು ಅಗತ್ಯವಾಗಿ ಬೇಕಾದ ಮೂಲ ಸೌಲಭ್ಯಗಳು (ವಸತಿ, ಆರೋಗ್ಯ, ಆಹಾರ, ಕುಡಿಯುವ ನೀರು, ದುಡಿಯುವ ಸಮಾನವಕಾಶ, ಸಮಾನತೆ ಇತ್ಯಾದಿ) ಇವುಗಳನ್ನು ಸಾರ್ವಜನಿಕವಾಗಿ ಅಥವಾ ಸಾಮುದಾಯಿಕವಾಗಿ ಒದಗಿಸಿಕೊಡುವುದು ಸಾಮಾಜಿಕ ಭದ್ರತೆ ಎನ್ನಿಸಿಕೊಳ್ಳುತ್ತದೆ.
ಆದರೆ ಅಸಂಘಟಿತ ವಲಯದ ದುಡಿಮೆಗಾರರಿಗೆ ಇಷ್ಟು ಕೂಡ ದೊರಕುತ್ತಿಲ್ಲ.

You Might Like

Post a Comment

0 Comments