Recent Posts

ಭಾರತದ ನಿಸರ್ಗ ವಿಕೋಪಗಳು - ೧೦ ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

  ಭಾರತದ ನಿಸರ್ಗ ವಿಕೋಪಗಳು

I. ಈ ಕೆಳಕಂಡ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ,

1. ನೈಸರ್ಗಿಕ ವಿಪತ್ತುಗಳೆಂದರೇನು?

ನೈಸರ್ಗಿಕ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತುಗಳು.

2. ಆವರ್ತಮಾರುತಗಳು ಎಂದರೇನು?
ಕಡಿಮೆ ಒತ್ತಡವುಳ್ಳ ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವುದೇ ಆವರ್ತಮಾರುತಗಳು

3. ಭಾರತದಲ್ಲಿ ಹೆಚ್ಚಾಗಿ ಸಂಭವಿಸುವ ಆವರ್ತ ಮಾರುತಗಳು ಯಾವುವು?
ಭಾರತದಲ್ಲಿ ಹೆಚ್ಚಾಗಿ ಸಂಭವಿಸುವ ಆವರ್ತಮಾರುತಗಳು ಉಷ್ಣವಲಯದ ಆವರ್ತ ಮಾರುತಗಳು

4. ‘ನದಿ ಪ್ರವಾಹ’ ಎಂದರೇನು?
ಕೆಲವೊಮ್ಮೆ ನದಿಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ ಪಕ್ಕದ ಭಾಗಗಳು ಜಲಾವೃತಗೊಳ್ಳುತ್ತವೆ. ಇದನ್ನು ‘ನದಿ ಪ್ರವಾಹ’ ಎನ್ನುವರು.

5. ಭೂಕುಸಿತ ಎಂದರೇನು?
ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿಗಳಿಗೆ “ಭೂಕುಸಿತ ಎನ್ನುವರು

6. ‘ಸಮುದ್ರದ ಕೊರೆತ’ ಎಂದರೇನು?
ಸಮುದ್ರ ಅಲೆಗಳು ಅವಿರತ ಸಂಘರ್ಷಣಾ ಪ್ರಕ್ರಿಯೆಯಿಂದ ತೀರವು ಸವೆಯುವ ಮತ್ತು ವಸ್ತುಗಳ ಒಯ್ಯುವಿಕೆಗೆ ‘ಸಮುದ್ರದ ಕೊರೆತ’ ಎನ್ನುವರು.

7. ಸುನಾಮಿ ಎಂದರೇನು?
ಸಮುದ್ರ ತಳದಲ್ಲಿ ಸಂಭವಿಸುವ ಭೂಕಂಪನದಿಂದಾಗುವ ದೈತ್ಯಾಕಾರದ ಆಲೆಗಳಿಗೆ ಸುನಾಮಿ ಎನ್ನುವರು.

8. ಭೂಕಂಪ ಎಂದರೇನು?
ಭೂಚಿಪ್ಪಿನಲ್ಲಾಗುವ ರಭಸವಾದ ಕಂಪನವನ್ನು ಭೂಕಂಪವನ್ನುವರು.

9. ‘ಕನಿಷ್ಠ ಭೂಕಂಪ ತೀವ್ರತೆಯ ವಲಯ’ ಎಂದು ಯಾವ ವಲಯವನ್ನು ಪರಿಗಣಿಸಲಾಗಿದೆ?
ಪರ್ಯಾಯ ದ್ವೀಪವಲಯ

10. ಭಾರತದಲ್ಲಿ ಈವರೆಗೆ ಸಂಭವಿಸಿರುವ ಭೂಕಂಪನಕ್ಕೆ ಮುಖ್ಯ ಕಾರಣವೇನು?
ಭಾರತದಲ್ಲಿ ಈವರೆಗೆ ಸಂಭವಿಸಿರುವ ಭೂಕಂಪನಗಳಲ್ಲಿ ಬಹಳಷ್ಟು ಭೂಫಲಕಗಳ ಚಲನೆಯಿಂದ ಸಂಭವಿಸಿದವು.

II. ಗುಂಪುಗಳಲ್ಲಿ ಚರ್ಚಿಸಿ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ,

1. ನೈಸರ್ಗಿಕ ವಿಪತ್ತುಗಳನ್ನು ಹೆಸರಿಸಿ.

•    ಭೂಕಂಪ, ಜ್ವಾಲಾಮುಖಿ, ಸುನಾಮಿ, ಭೂಕುಸಿತ ಮತ್ತು ಹಿಮಪಾತಗಳು ಭೂಆಂತರಿಕ ಕ್ರಿಯೆಗಳಿಂದ ಸಂಭವಿಸುವ ನೈಸರ್ಗಿಕ ವಿಪತ್ತುಗಳು.
•    ಆವರ್ತಮಾರುತ (ಸೈಕ್ಲೋನ್), ಬರಗಾಲ, ಪ್ರವಾಹ ಮತ್ತು ಸಾಂಕ್ರಾಮಿಕ ಪಿಡುಗುಗಳು ವಾಯುಗೋಳಕ್ಕೆ ಸಂಬಧಿಸಿದ ನೈಸರ್ಗಿಕ ವಿಪತ್ತುಗಳಾಗಿವೆ.

2. ಆವರ್ತ ಮಾರುತಗಳ ಪರಿಣಾಮಗಳು ಯಾವುವು?
•    ಉಷ್ಣವಲಯದ ಆವರ್ತಮಾರುತಗಳು ಬಹಳ ವಿನಾಶಕಾರಿಯಾದವು.
•    ಅವು ಸಾವು ಮತ್ತು ಆಸ್ತಿಗಳಿಗೆ ಹಾನಿಯನ್ನುಂಟುಮಾಡುತ್ತವೆ. ಕಟ್ಟಡಗಳಿಗೆ ಧಕ್ಕೆ, ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳನ್ನು ಅಸ್ತವ್ಯಸ್ತಗೊಳಿಸುತ್ತವೆ.
•    ವಿದ್ಯುತ್ ಸರಬರಾಜಿಗೆ ಅಡಚಣೆ, ಬೆಳೆಗಳು, ಸ್ವಾಭಾವಿಕ ಸಸ್ಯವರ್ಗ, ಪ್ರಾಣಿ ಸಂಕುಲ ಮೊದಲಾದವುಗಳಿಗೂ ಹಾನಿಯನ್ನುಂಟುಮಾಡುವವು

3. ಆವರ್ತಮಾರುತಗಳ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿ.
•    ಆವರ್ತಮಾರುತಗಳು ನೈಸರ್ಗಿಕ ವಿಪತ್ತುಗಳಾಗಿದ್ದು, ಅವುಗಳನ್ನು ನಾವು ತಡೆಗಟ್ಟಲಾಗುವುದಿಲ್ಲ.
•    ಆದರೆ ಜನರು ಮುನ್ನೆಚ್ಚರಿಕೆಯ ಕಡೆಗೆ ಲಕ್ಷ್ಯಕೊಡಬಹುದು, ಅವರು ಆಕಾಶವಾಣಿ, ದೂರದರ್ಶನ ಮತ್ತು ಇತರೆ ಸಂಪರ್ಕಮಾದ್ಯಮಗಳು ಬಿತ್ತರಿಸುವ ಎಚ್ಚರಿಕೆಗಳನ್ನು ಗಮನಿಸಬೇಕು.
•    ಆವರ್ತಮಾರುತಗಳು ಸಂಭವಿಸಿದ ಸಂದರ್ಭಗಳಲ್ಲಿ ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಬೇಕು.
•    ಆವರ್ತಮಾರುತಗಳ ಹೊಡೆತ ಮತ್ತು ಕಡಲಕೊರತೆಗಳನ್ನು ನಿಯಂತ್ರಿಸುವಂತಹ ಮಾಂಗೋವ್ ಕಾಡು ಮತ್ತು ಆಳಕ್ಕೆ ಬೇರು ಬಿಡುವ ಇತರೆ ಮರಗಳನ್ನು ಸಮುದ್ರ ತೀರದಲ್ಲಿ ಬೆಳೆಸಬೇಕು.

4. ಪ್ರವಾಹಗಳಿಗೆ ಕಾರಣಗಳೇನು?
•    ಪ್ರವಾಹಗಳು ನೈಸರ್ಗಿಕ ಪರಿಸ್ಥಿತಿಗಳಿಂದ ಮಾತ್ರವಲ್ಲ ಮಾನವ ಕೃತ್ಯಗಳಿಂದಲೂ ಸಂಭವಿಸುತ್ತವೆ.
•    ನೈಸರ್ಗಿಕ ಪರಿಸ್ಥಿತಿಗಳಲ್ಲಿ ಅತ್ಯಧಿಕ ಮಳೆ, ಹಿಮಕರಗುವಿಕೆ, ಆವರ್ತಮಾರುತ, ಮೇಘಸ್ಫೋಟ, ನದಿಸರಾಗವಾಗಿ ಹರಿಯಲಾರದಷ್ಟು ಅಡಚಣೆ, ನದಿ ಪಾತ್ರದಲ್ಲಿ ಹೂಳುತುಂಬುವಿಕೆ ಇತ್ಯಾದಿಗಳು ಸೇರುತ್ತವೆ.
•    ಮಾನವ ಕೃತ್ಯಗಳಲ್ಲಿ ಅರಣ್ಯನಾಶ, ಅವೈಜ್ಞಾನಿಕ ನೀರಾವರಿ ವ್ಯವಸ್ಥೆ ಮತ್ತು ಕೃಷಿ ಪದ್ಧತಿ, ಒಡ್ಡು ಮತ್ತು ಆಣೆಕಟ್ಟುಗಳು ಒಡೆದು ಹೋಗುವುದರಿಂದ ಮತ್ತು ಶೀಘ್ರಗತಿಯ ನಗರೀಕರಣ

5. ಪ್ರವಾಹಗಳ ಪರಿಣಾಮಗಳು ಯಾವುವು?
•    ಜೀವಹಾನಿ
•    ಆಸ್ತಿಗೆ ಧಕ್ಕೆ
•    ಬೆಳೆ ಮತ್ತು ಸಸ್ಯವರ್ಗಗಳಿಗೆ ಹಾನಿ
•    ಸಾರಿಗೆ ಸಂಪರ್ಕಗಳ ಅವ್ಯವಸ್ಥೆ
•    ಮಣ್ಣಿನ ಸವೆತ
•    ಮೂಲ ಸೌಲಭ್ಯಗಳ ವ್ಯತ್ಯಯ

6. ಪ್ರವಾಹ ನಿಯಂತ್ರಣ ಕ್ರಮಗಳು ಯಾವುವು?
•    ಜಲಾನಯನ ಪ್ರದೇಶದಲ್ಲಿ ಅರಣ್ಯ ಬೆಳೆಸುವುದು ಮತ್ತು ವೇಗವಾದ ನೀರಿನ ಹರಿವು ನಿಯಂತ್ರಣ.
•    ಅಣೆಕಟ್ಟುಗಳನ್ನು ನಿರ್ಮಿಸಿ ಜಲಾಶಯಗಳಲ್ಲಿ ನೀರು ಸಂಗ್ರಹಿಸಿ ನದಿ ನೀರಿನ ಪ್ರಮಾಣವನ್ನು ಕಡಿಮೆಮಾಡುವುದು,
•    ಸಂಗ್ರಹಿಸಿದ ನೀರನ್ನು ನೀರಾವರಿ ಮೊದಲಾದ ಉದ್ದೇಶಗಳಿಗಾಗಿ ಬಳಕೆ,
•    ಜನವಸತಿಗಳ ಪ್ರದೇಶ ಮತ್ತು ಕೃಷಿ ಭೂಮಿಗಳನ್ನು ಪ್ರವಾಹದಿಂದ ರಕ್ಷಿಸಲು ಒಡ್ಡುಗಳ ನಿರ್ಮಾಣ,
•    ಪ್ರವಾಹಗಳ ಬಗ್ಗೆ ಮುನ್ಸೂಚನೆ ಮತ್ತು ಸಕಾಲಿಕ ಮುನ್ನೆಚ್ಚರಿಕೆ ನೀಡುವುದು.
•    ಇದು ಜನ, ಜಾನುವಾರುಗಳ ಸಾವು- ನೋವು ಮತ್ತು ಆಸ್ತಿಗಳಿಗಾಗುವ ನಷ್ಟವನ್ನು ತಡೆಯಲು ಅಗತ್ಯವಾದ ಸಕಾಲಿಕ ಕ್ರಮ,

7. ಭೂಕುಸಿತಗಳ ಕಾರಣಗಳು ಯಾವುವು?
•    ನೈಸರ್ಗಿಕ ಕಾರಣಗಳು : ಕಡಲ ಕಡಿದಾದ ಬಂಡೆಯ ತಳವನ್ನು ಸಮುದ್ರ ಅಲೆಗಳು ಸವೆಸುವಂತಹ ಇಳಿಜಾರಿನ ಅಡಿಭಾಗದ ಸವೆತ, ಅತ್ಯಧಿಕ ಮಳೆ ಮತ್ತು ಭೂಕಂಪಗಳು.
•    ಮಾನವ ಕೃತ್ಯಗಳು : ಅರಣ್ಯನಾಶ, ರೈಲು, ರಸ್ತೆಗಳು, ಅಣೆಕಟ್ಟು, ಜಲಾಶಯ ಮತ್ತು ಜಲವಿದ್ಯುತ್ ಯೋಜನೆಗಳ ನಿರ್ಮಾಣ, ತೀವ್ರಗತಿಯ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಇತ್ಯಾದಿ.

8. ಭೂಕುಸಿತದ ಪರಿಣಾಮಗಳು ಯಾವುವು?
•    ಭೂಕುಸಿತಗಳೂ ಸಹ ನೈಸರ್ಗಿಕ ವಿನಾಶಕಾರಿ ವಿಪತ್ತುಗಳಾಗಿವೆ.
•    ರೈಲುಮಾರ್ಗ, ರಸ್ತೆಗಳಿಗೆ ಅಡಚಣೆ, ಜನವಸತಿ ಮತ್ತು ಸಸ್ಯವರ್ಗಗಳು ಭೂಗತವಾಗುವುದು,
•    ಸಾವು-ನೋವು ಮತ್ತು ಆಸ್ತಿಗಳಿಗೆ ಹಾನಿ.
•    ಇವುಗಳಲ್ಲಿ ಆಗಾಗ್ಗೆ ರಸ್ತೆಗಳಿಗೆ ಅಡಚಣೆ ಸರ್ವಸಾಮಾನ್ಯ

9. ಭೂಕುಸಿತದ ನಿಯಂತ್ರಣ ಕ್ರಮಗಳು ಯಾವುವು?
•    ಇಳಿಜಾರನ್ನು ತಗ್ಗಿಸುವುದು.
•    ಹೆದ್ದಾರಿಗಳ ಬದಿ ಮತ್ತಿತರ ಇಳಿಜಾರುಗಳಲ್ಲಿ ಬಂಡೆಗಳು ಬೀಳದಂತೆ ತಡೆಯುವುದು.
•    ಕಡಿದಾದ ಇಳಿಜಾರುಳ್ಳ ಭಾಗ ಮತ್ತು ಜನವಸತಿಗಳ ಭಾಗಗಳಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಣಿ ಚಟುವಟಿಕೆಗಳ ನಿಯಂತ್ರಣ, ಆರಣ್ಯಕರಣ ಮೊದಲಾದ ಕ್ರಮಗಳು ಭೂಕುಸಿತಗಳ ನಿಯಂತ್ರಣಕ್ಕೆ ಅವಶ್ಯ

10, ಸಮುದ್ರ ತೀರದ ಸವೆತದ ಪರಿಣಾಮಗಳು ಯಾವುವು?

•    ಕರಾವಳಿ ಪ್ರದೇಶದ ಕಟ್ಟಡ ಮತ್ತು ಮರಗಳು ಕೊಚ್ಚಿಹೋಗುವುದು.
•    ಕರಾವಳಿಯ ರಸ್ತೆ ಮತ್ತು ರೈಲು ಮಾರ್ಗಗಳಿಗೆ ಧಕ್ಕೆ
•    ಹೆಚ್ಚು ಕಾಲ ಕರಾವಳಿಯಲ್ಲಿ ನೀರು ತುಂಬಿಕೊಳ್ಳುವುದರಿಂದ ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸುವ ಸಮಸ್ಯೆ

11. ಸಮುದ್ರ ತೀರದ ಸವೆತದ ನಿಯಂತ್ರಣ ಕ್ರಮಗಳು ಯಾವುವು?
•    ಸಮುದ್ರ ಅಲೆಗಳ ಹೊಡೆತವನ್ನು ನಿಯಂತ್ರಿಸಲು ಸಮುದ್ರ ಗೋಡೆ, ತಡೆಗಟ್ಟು ಮತ್ತು ಅಲೆತಡೆಗಳ ನಿರ್ಮಾಣ.
•    ತೀರಗಳಲ್ಲಿ ಮರಳು ಮತ್ತು ಗಣಿಗಾರಿಕೆಗಳ ನಿಷೇದ
•    ಸಮುದ್ರ ದಡ ಮತ್ತು ಮರಳು ರಾಶಿಗಳನ್ನು ಉಳಿಸಲು ಮತ್ತು ಸುಸ್ಥಿರತೆಗಾಗಿ ಮರಗಳನ್ನು ಬೆಳೆಸುವುದು.

12, ಭೂಕಂಪನಕ್ಕೆ ಕಾರಣಗಳು ಯಾವುವು?
•    ಭೂಕಂಪಗಳು ಭೂಫಲಕಗಳ ಚಲನೆ
•    ಜ್ವಾಲಾಮುಖ
•    ಶಿಲಾಸ್ತರಗಳ ಭಂಗ ಮತ್ತು ಮಡಿಕೆ
•    ಭೂಕುಸಿತ
•    ಅಂತರ್ಗುಹ ಮೇಲ್ದಾವಣಿಯ ಕುಸಿತ
•    ಮಾನವ ನಿರ್ಮಿತ ಜಲಾಶಯಗಳ ನೀರಿನ ಭಾರ

13. ಭೂಕಂಪದ ಪರಿಣಾಮಗಳು ಯಾವುವು?
•    ನೆಲದ ಮೇಲಿನ ಬಿರುಕು
•    ಕಟ್ಟಡ, ರೈಲು ಮಾರ್ಗ, ರಸ್ತೆ, ವಿದ್ಯುತ್ ಸಂಚಾರ, ಸಂಪರ್ಕ ಮಾದ್ಯಮ, ಸೇತುವೆ, ಅಣೆಕಟ್ಟುಗಳ ಒಡೆತ,
•    ಕಾರ್ಖಾನೆಗಳಿಗೆ ಹಾನಿ
•    ಮಾನದ ಮತ್ತು ಜಾನುವಾರುಗಳ ಸಾವು ಮತ್ತು ಆಸ್ತಿಗಳಿಗೆ ಹಾನಿ
•    ಬೆಂಕಿ ಅನಾಮತ
•    ಭೂಕುಸಿತ
•    ಅಂತರ್ಜಲ ಮಟ್ಟದಲ್ಲಿ ವ್ಯತ್ಯಾಸ
•    ನದಿ ವ್ಯವಸ್ಥೆಯ ವಿಚಲನೆ ಅಥವಾ ಅಡಚಣೆ

14. ಭೂಕಂಪದ ಮುನ್ನೆಚ್ಚರಿಕಾ ಕ್ರಮಗಳು ಯಾವುವು?
•    ಭೂಕಂಪನಾದಲಯಗಳಲ್ಲಿ ಜನವಸತಿಗಳ ನಿರ್ಮಾಣ ನಿಷೇಧ
•    ಭೂಕಂಪನ ನಿರೋಧಕ ಕಟ್ಟಡಗಳ ನಿರ್ಮಾಣವನ್ನು ಅನುಸರಿಸುವುದು,
•    ಉತ್ತಮ ದರ್ಜೆಯ ಕಟ್ಟಡ ನಿರ್ಮಾಣದ ವಸ್ತುಗಳ ಬಳಕೆ ಮತ್ತು ಬಹುಮಹಡಿ ಕಟ್ಟಡ ನಿರ್ಮಾಣವನ್ನು ಕೈಬಿಡುವುದು.
•    ಅಂತರ್ಜಲಕ್ಕಾಗಿ ಬಾವಿಗಳ ಆಳಕೊರೆತವನ್ನು ನಿಷೇಧಿಸುವುದು,
•    ಭೂಕಂಪನ ತೀವ್ರತೆಯುಳ್ಳ ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ನಗರ ಬೆಳೆವಣಿಗೆಗೆ ನಿರ್ಬಂಧ,
•    ಬಹುದೊಡ್ಡ ಅಣೆಕಟ್ಟು ಮತ್ತು ಜಲಾಶಯಗಳ ನಿರ್ಮಾಣಕ್ಕೆ ನಿಷೇಧ
•    ಅರಣ್ಯನಾಶ ಮತ್ತು ತೀವ್ರ ಸ್ವರೂಪದ ಗಣಿಗಾರಿಕಾ ಚಟುವಟಿಕೆಗಳನ್ನು ತಡೆಗಟ್ಟುವುದು.


You Might Like

Post a Comment

0 Comments