Recent Posts

ಪುಟ್ಟಹಕ್ಕಿ - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಪುಟ್ಟಹಕ್ಕಿ

ಜಂಬಣ್ಣ ಅಮರಚಿಂತ
 
ಅ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.  

1. ಪುಟ್ಟಹಕ್ಕಿ ಗೂಡನ್ನು ಹೇಗೆ ಕಟ್ಟುತ್ತದೆ?  
ಉತ್ತರ: ಪುಟ್ಟಹಕ್ಕಿ ಕಡ್ಡಿ ಕಡ್ಡಿ ಕೂಡಿಸಿ ಗೂಡು ಕಟ್ಟುವುದು.  

2. ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಯಾರನ್ನು ಸ್ವಾಗತಿಸುತ್ತದೆ?  
ಉತ್ತರ: ಗೀತೆಯನ್ನು ಹಾಡುತ್ತಾ ಪುಟ್ಟಹಕ್ಕಿ ಸೂರ್ಯನನ್ನು ಸ್ವಾಗತಿಸುತ್ತದೆ.  

3. ಜಗದಲ್ಲಿ ಎಂತಹ ಜನರಿರುವರು?  
ಉತ್ತರ: ಜಗದಲ್ಲಿ ಮೂಡಿದ ರೆಕ್ಕೆಗಳ ಮುರಿಯುವ ಜನರಿರುವರು.  

4. ಪುಟ್ಟಹಕ್ಕಿ ಜಗದಂಗಳದಲ್ಲಿ ಹೇಗೆ ಹಾರುತ್ತದೆ?  
ಉತ್ತರ: ಪುಟ್ಟಹಕ್ಕಿ ಜಗದಂಗಳದಲಿ ಆ ಮೂಲೆಯಿಂದ ಈ ಮೂಲೆಗೆ ಸದಾ ಹಾರುವುದು.  

5. ಭೂಮಿ-ಆಕಾಶದಲ್ಲಿ ಪುಟ್ಟಹಕ್ಕಿಗೆ ಯಾರ ಭಯವಿದೆ?  
ಉತ್ತರ: ಪುಟ್ಟಹಕ್ಕಿಗೆ ಭೂಮಿಯಲಿ ಭುಜಂಗನ ಭಯ, ಆಕಾಶದಲಿ ಗಿಡುಗನ ಭಯವಿದೆ.
 
You Might Like

Post a Comment

0 Comments