Recent Posts

ಜೀವದ ಮೂಲ ಘಟಕ - ೯ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಜೀವದ ಮೂಲ ಘಟಕ

ಪಠ್ಯ ಪ್ರಶ್ನೆಗಳು:

1.ಜೀವಕೋಶಗಳನ್ನು ಯಾರು ಆವಿಷ್ಕರಿಸಿದರು ಮತ್ತು ಹೇಗೆ?
ರಾಬರ್ಟ್ ಹುಕ್ ಜೀವಕೋಶಗಳನ್ನು ಆವಿಷ್ಕರಿಸಿದರು.
ರಾಬರ್ಟ್ ಹುಕ್ರವರು ಕಾರ್ಡ್ ತೆಳುವಾದ ಪದರವನ್ನು ಪರಿಶೀಲಿಸುತ್ತಿದ್ದಾಗ ಜೇನುಗೂಡನ್ನು ಹೋಲುವ ಸಣ್ಣ ಸಣ್ಣ ಕೋಣೆಗಳಂತಹ ರಚನೆಗಳನ್ನು ಗಮನಿಸಿದರು. ಈ ಸಣ್ಣ ಕೋಣೆಗಳಂತಹ ರಚನೆಗಳನ್ನು ಸೆಲ್ (ಜೀವಕೋಶ) ಗಳೆಂದು ಕರೆದರು.

2.ಜೀವಕೋಶವನ್ನು ಜೀವಿಯ ರಚನೆಯ ಮತ್ತು ಕಾರ್ಯನಿರ್ವಹಣೆಯ ಮೂಲ ಘಟಕ ಎಂದು ಏಕೆ ಕರೆಯುತ್ತಾರೆ?
ಎಲ್ಲಾ ಜೀವಿಗಳೂ ಜೀವಕೋಶಗಳಿಂದ ಮಾಡಲ್ಪಟ್ಟಿವೆ. ಒಂದೇ ಜೀವಕೋಶವನ್ನು ಹೊಂದಿರುವ ಏಕಕೋಶ ಜೀವಿ ಮತ್ತು ಪ್ರತಿ ಬಹುಕೋಶೀಯ ಜೀವಿಯೂ ಒಂದೇ ಬಗೆಯ ಜೀವಕೋಶದಿಂದ ಉಂಟಾಗಿವೆ.
ಒಂದು ಜೀವಕೋಶವು ಜೀವಂತವಾಗಿದ್ದು ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು ಕಣದಂಗಗಳು ಕಾರಣವಾಗಿವೆ. ಈ ಕಣದಂಗಗಳು ಒಟ್ಟುಗೂಡಿ ಮೂಲ ಘಟಕವಾದ ಜೀವಕೋಶವನ್ನು ರೂಪಿಸಿವೆ. ಆದುದರಿಂದ ಜೀವಕೋಶವನ್ನು ಜೀವಿಯ ರಚನೆಯ ಮತ್ತು ಕಾರ್ಯನಿರ್ವಹಣೆಯ ಮೂಲ ಘಟಕ ಎಂದು ಕರೆಯುತ್ತಾರೆ.

3. ಜೀವಕೋಶದ ರಚನಾತ್ಮಕ ವ್ಯವಸ್ಥೆಗಳು ಯಾವುವು?
ಕೋಶಮೊರೆ, ಕೋಶಕೇಂದ್ರ ಮತ್ತು ಕೋಶದ್ರವ್ಯ ಮೂರು ಘಟಕಗಳು ರಚನಾತ್ಮಕ ವ್ಯವಸ್ಥೆಗಳು ಆಗಿವೆ.

4. ಕೋಶಪೊರೆ ಎಂದರೇನು? ಕೋಶಪೊರೆಯ ಕಾರ್ಯವೇನು?
ಜೀವಕೋಶದ ಒಳಗಿನ ಭಾಗಗಳನ್ನು ಹೊರಗಿನ ಪರಿಸರದಿಂದ ಬೇರ್ಪಡಿಸುವ ಅತ್ಯಂತ ಹೊರಗಿನ ಹೊದಿಕೆಯನ್ನು ಕೋಶಪೊರೆ ಎನ್ನುವರು.
ಕೋಶಪೊರೆಯು ಜೀವಕೋಶದ ಒಳಗೆ ಹೋಗುವ ಮತ್ತು ಹೊರಬರುವ ಕೆಲವು ವಸ್ತುಗಳ ಚಲನೆಯನ್ನೂ ನಿಯಂತ್ರಿಸುತ್ತದೆ. ಮತ್ತು ಕೆಲವು ವಸ್ತುಗಳ ಚಲನೆಯನ್ನು ತಡೆಗಟ್ಟುತ್ತದೆ.

5. ಕೋಶಪೊರೆಯನ್ನು ಅರೆವ್ಯಾಪ್ಯ ಪೊರೆ(selectively permeable membrane) ಎಂದು ಕರೆಯಲು ಕಾರಣವೇನು?
ಕೋಶಪೊರೆಯು ಜೀವಕೋಶದ ಒಳಗೆ ಹೋಗುವ ಮತ್ತು ಹೊರಬರುವ ಕೆಲವು ವಸ್ತುಗಳ ಚಲನೆಯನ್ನು ನಿಯಂತ್ರಿಸುತ್ತದೆ. ಹಾಗೂ ಕೆಲವು ವಸ್ತುಗಳ ಚಲನೆಯನ್ನು ತಡೆಗಟ್ಟುತ್ತದೆ ಆದ್ದರಿಂದ ಕೋಶಮೊರೆಯನ್ನು ಅರೆವ್ಯಾಪ್ಯ ಪೊರೆ ಎಂದು ಕರೆಯುತ್ತಾರೆ.

6. ವಿಸರಣೆ(diffusion) ಎಂದರೇನು?.
ವಸ್ತುಗಳು ಆಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಸಹಜವಾಗಿ ಚಲಿಸುವ ಕ್ರಿಯೆಯನ್ನು ವಿಸರಣೆ ಎನ್ನುವರು

7. ಅಭಿಸರಣೆ(osmosis) ಎಂದರೇನು?
ನೀರಿನ ಅಣುಗಳು ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಆರೆವ್ಯಾಜ್ಯ ಮೊರೆಯ ಮೂಲಕ ಹಾದು ಹೋಗುವ ಕ್ರಿಯೆಯನ್ನು ಅಭಿಸರಣೆ ಎನ್ನುವರು.

8. ಸಕ್ಕರೆಯ ಆಥವಾ ಉಪ್ಪಿನ ದ್ರಾವಣದಲ್ಲಿ ಒಂದು ಪ್ರಾಣಿ ಜೀವಕೋಶ ಅಥವಾ ಸಸ್ಯ ಜೀವಕೋಶವನ್ನು ಇರಿಸಿದರೆ ಏನಾಗಬಹುದು?
ಸಕ್ಕರೆಯ ಅಥವಾ ಉಪ್ಪಿನ ದ್ರಾವಣದಲ್ಲಿ ಒಂದು ಪ್ರಾಣಿ ಜೀವಕೋಶ ಅಥವಾ ಸಸ್ಯ ಜೀವಕೋಶವನ್ನು ಇರಿಸಿದರೆ ಈ ಮೂರು ಕ್ತಿಯೆಗಳಲ್ಲಿ ಯಾವುದಾದರೊಂದು ಕ್ರಿಯೆ ಜರುಗಬಹುದು. ಜೀವಕೋಶವನ್ನು ಆವರಿಸಿದ ಮಾಧ್ಯಮದ ನೀರಿನ ಸಾರತೆಯು ಜೀವಕೋಶದೊಳಗಿನ ನೀರಿನ ಸಾರತೆಗಿಂತ ಹೆಚ್ಚಾಗಿದ್ದಲ್ಲಿ ಅಂದರೆ ಜೀವಕೋಶವನ್ನು ಆವರಿಸಿದ ದ್ರಾವಣವು ಅತಿ ದುರ್ಬಲವಾಗಿದ್ದರೆ ಅಭಿಸರಣೆಯಿಂದ ಜೀವಕೋಶವು ನೀರನ್ನು ಪಡೆಯುತ್ತದೆ. ಇಂತಹ ದ್ರಾವಣವನ್ನು ಅತಿ ಕಡಿಮೆ ಸಾರತೆ (hypotonic solution) ದ್ರಾವಣ ಎನ್ನುವರು.
ನೀರಿನ ಅಣುಗಳು ಕೋಶಪೊರೆಯ ಮೂಲಕ ಎರಡೂ ದಿಕ್ಕಿನಲ್ಲಿ ಸರಾಗವಾಗಿ ಚಲಿಸುತ್ತವೆ. ಆದರೆ ಜೀವಕೋಶದಿಂದ ಹೊರಗೆ ಹೋಗುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಜೀವಕೋಶದೊಳಗೆ ಚಲಿಸುತ್ತದೆ. ಒಟ್ಟಾರೆ ಇದರ ಪರಿಣಾಮವಾಗಿ ನೀರು ಜೀವಕೋಶವನ್ನು ಪ್ರವೇಶಿಸುತ್ತದೆ. ಇದರಿಂದ ಜೀವಕೋಶವು ಉಬ್ಬುವ ಸಾಧ್ಯತೆ ಇದೆ.
ಜೀವಕೋಶವನ್ನು ಆವರಿಸಿದ ಮಾಧ್ಯಮದ ನೀರಿನ ಸಾರತೆಯು ನಿಖರವಾಗಿ ಜೀವಕೋಶದೊಳಗಿನ ನೀರಿನ ಸಾರತೆಯಷ್ಟೇ ಇದ್ದರೆ ಕೋಶಪೊರೆಯ ಮೂಲಕ ನೀರಿನ ಕಣಗಳ ಚಲನೆ ಇರುವುದಿಲ್ಲ.ಇಂತಹ ದ್ರಾವಣವನ್ನು ಸಮಸಾರತೆ ದ್ರಾವಣ (isotonic solution) ಎನ್ನುವರು. ನೀರಿನ ಅಣುಗಳು ಕೋಶಪೊರೆಯ ಎರಡೂ ದಿಕ್ಕಿನಲ್ಲಿ ಸರಾಗವಾಗಿ ಚಲಿಸುತ್ತವೆ. ಆದರೆ ಜೀವಕೋಶದ ಒಳಗೆ ಬರುವ ನೀರಿನ ಪ್ರಮಾಣವು ಹೊರಗೆ ಹೋಗುವ ನೀರಿನ ಪ್ರಮಾಣದಷ್ಟೇ ಇರುತ್ತದೆ. ಆದ್ದರಿಂದ ಒಟ್ಟಾರೆಯಾಗಿ ನೀರಿನ ಚಲನೆ ಇರುವುದಿಲ್ಲ. ಜೀವಕೋಶವು ಮೂಲ ಗಾತ್ತದಲ್ಲೇ ಇರುತ್ತದೆ.
ಜೀವಕೋಶವನ್ನು ಆವರಿಸಿದ ಮಾಧ್ಯಮದ ನೀರಿನ ಸಾರತೆಯು ಜೀವಕೋಶದೊಳಗಿನ ನೀರಿನ ಸಾರತೆಗಿಂತ ಕಡಿಮೆಯಾಗಿದ್ದಲ್ಲಿ ಆಂದರೆ ಜೀವಕೋಶವನ್ನು ಆವರಿಸಿದ ದ್ರಾವಣವು ಪ್ರಬಲವಾಗಿದ್ದರೆ ಜೀವಕೋಶವು ಅಭಿಸರಣೆಯಿಂದ ನೀರನ್ನು ಕಳೆದುಕೊಳ್ಳುತ್ತದೆ. ಅಂತಹ ದ್ರಾವಣವನ್ನು ಅಧಿಕ ಸಾರತೆ ದ್ರಾವಣ (hypertonic solution) ಎನ್ನುವರು. ಪುನಃ ನೀರು ಕೋಶಪೊರೆಯ ಮೂಲಕ ಎರಡೂ ದಿಕ್ಕಿನಲ್ಲಿ ಚಲಿಸುತ್ತದೆ, ಆದರೆ ಈ ಬಾರಿ ಜೀವಕೋಶದ ಒಳಗೆ ಹೋಗುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಜೀವಕೋಶದಿಂದ ಹೊರಗೆ ಚಲಿಸುತ್ತದೆ. ಆದ್ದರಿಂದ ಜೀವಕೋಶವು ಮುದುಡುತ್ತದೆ. ಹೀಗೆ ಅಭಿಸರಣೆ ಎಂಬುದು ಆರವ್ಯಾಪ್ಯ ಮೊರೆಯ ಮೂಲಕ ಆಗುವ ವಿಶೇಷ ರೀತಿಯ ವಿಸರಣೆಯಾಗಿದೆ.

9. ಎಂಡೋಸೈಟೋಸಿಸ್ (endocytosis) ಎಂದರೇನು?
ಕೋಶಪೊರೆಯ ನಮ್ಯತೆಯಿಂದಾಗಿ ಜೀವಕೋಶವು ತನ್ನ ಹೊರಗಿನ ಪರಿಸರದಿಂದ ಆಹಾರ ಮತ್ತು ಇತರ ವಸ್ತುಗಳನ್ನು ತನ್ನೊಳಗೆ ತೆಗೆದುಕೊಳ್ಳಲು ಸಾಧ್ಯವಾಗಿದೆ. ಈ ಪ್ರಕ್ರಿಯೆಯನ್ನು ಎಂಡೋಸೈಟೋಸಿಸ್ (endocytosis) ಎನ್ನುವರು.
ಎಂಡೋಸೈಟೋಸಿಸ್(endocytosis) ವಿಧಾನದಿಂದ ಅಮೀಬಾವು ತನ್ನ ಆಹಾರವನ್ನು ಪಡೆಯುತ್ತದೆ.

10. ಕಾರ್ಬನ್ ಡೈಆಕ್ಸೆಸ್ ಮತ್ತು ನೀರಿನಂತಹ ವಸ್ತುಗಳು ಜೀವಕೋಶದ ಒಳಗೆ ಮತ್ತು ಹೊರಗೆ ಹೇಗೆ ಚಲಿಸುತ್ತವೆ?ಚರ್ಚಿಸಿ,
ಕಾರ್ಬನ್ ಡೈ ಆಕ್ಸಡ್ ಅಥವಾ ಆಕ್ಸಿಜನ್ನಂತಹ ಕೆಲವು ವಸ್ತುಗಳು ಕೋಶಪೊರೆಯ ಮೂಲಕ ಚಲಿಸುತ್ತವೆ. ಈ ಪ್ರಕ್ರಿಯೆಯನ್ನು ವಿಸರಣೆ (diffusion) ಎಂದು ಕರೆಯುತ್ತೇವೆ.
ಕಾರ್ಬನ್ ಡೈ ಆಕ್ಸೆಡ್ (ಕೋಶದಿಂದ ಹೊರ ಹಾಕಬೇಕಾದ ಕೋಶತ್ಯಾಜ್ಯನಂತಹ ವಸ್ತುಗಳು ಅಧಿಕ ಸಾರತೆಯಲ್ಲಿ ಜೀವಕೋಶದೊಳಗೆ ಸಂಗ್ರಹವಾಗುತ್ತದೆ. ಇದಕ್ಕೆ ಹೋಲಿಸಿದರೆ ಜೀವಕೋಶದ ಹೊರಗಿನ ಪರಿಸರದಲ್ಲಿ ಕಾರ್ಬನ್ ಡೈ ಆಕ್ಸೆಡ್ ಸಾರತೆ ಕಡಿಮೆ ಇರುತ್ತದೆ. ಜೀವಕೋಶದೊಳಗೆ ಮತ್ತು ಹೊರಗೆ ಕಾರ್ಬನ್ ಡೈ ಆಕ್ಸಡ್ ಸಾರತೆಯಲ್ಲಿ ವ್ಯತ್ಯಾಸ ಕಂಡುಬಂದ ಕೂಡಲೇ ಕಾರ್ಬನ್ ಡೈ ಆಕ್ಸಡ್ ಅಧಿಕ ಸಾರತೆ ಪ್ರದೇಶದಿಂದ ಕಡಿಮೆ ಸಾರತೆ ಪ್ರದೇಶಕ್ಕೆ ವಿಸರಣೆ ಪ್ರಕ್ರಿಯೆಯಿಂದ ಜೀವಕೋಶದೊಳಗಿನಿಂದ ಹೊರಗೆ ಚಲಿಸುತ್ತದೆ.
ಅದೇ ರೀತಿ ಜೀವಕೋಶದೊಳಗೆ ಆಕ್ಸಿಜನ್ ಸಾರತೆ ಕಡಿಮೆಯಾಗುತ್ತಿದ್ದಂತೆ ವಿಸರಣೆ ಪ್ರಕ್ರಿಯೆಯಿಂದ ಆಕ್ಸಿಜನ್ ಜೀವಕೋಶದೊಳಗೆ ಪ್ರವೇಶಿಸುತ್ತದೆ, ಈ ರೀತಿ, ವಿಸರಣೆ ಕ್ರಿಯೆಯು ಜೀವಕೋಶಗಳ ನಡುವೆ ಮತ್ತು ಜೀವಕೋಶ ಹಾಗೂ ಅದರ ಹೊರಗಿನ ಪರಿಸರದ ನಡುವೆ ನಡೆಯುವ ಅನಿಲಗಳ ವಿನಿಮಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನೀರೂ ಕೂಡಾ ವಿಸರಣೆಯ ನಿಯಮವನ್ನು ಪಾಲಿಸುತ್ತದೆ. ಆರವ್ಯಾಪ್ಯ ಪೊರೆಯ ಮೂಲಕ ನೀರಿನ ಆಣುಗಳ ಚಲನೆಗೆ ಅಭಿಸರಣೆ (osmosis) ಎಂದು ಹೆಸರು. ನೀರಿನಲ್ಲಿ ಕರಗಿರುವ ವಸ್ತುಗಳ ಪ್ರಮಾಣವು ಕೋಶಪೊರೆಯ ಮೂಲಕ ಚಲಿಸುವ ನೀರಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಅಭಿಸರಣೆ ಎನ್ನುವುದು ನೀರಿನ ಅಣುಗಳು ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಆರವ್ಯಾಪ್ಯ ಪೊರೆಯ ಮೂಲಕ ಹಾದು ಹೋಗುವ ಕ್ರಿಯೆಯಾಗಿದೆ.

11.ಕೋಶಭಿತ್ತಿ ಎಂದರೇನು? ಕೋಶಭಿತ್ತಿಯ ಕಾರ್ಯವೇನು?
ಸಸ್ಯ ಜೀವಕೋಶಗಳು ಕೋಶಪೊರೆಯ ಜೊತೆಗೆ ಗಡುಸಾದ ಹೊರ ಪದರವನ್ನು ಕೋಶಭಿತ್ತಿ (cellwall) ಎನ್ನುವರು. ಕೋಶಭಿತ್ತಿಯು ಕೋಶಪೊರೆಯ ಹೊರಭಾಗದಲ್ಲಿದೆ. ಸಸ್ಯಗಳ ಕೋಶಭಿತ್ತಿಯು ಪ್ರಮುಖವಾಗಿ ಸೆಲ್ಯುಲೋಸ್ ಎಂಬ ವಸ್ತುವಿನಿಂದಾಗಿದೆ. ಸೆಲ್ಯುಲೋಸ್ ಒಂದು ಸಂಕೀರ್ಣ: ವಸ್ತುವಾಗಿದ್ದು ಸಸ್ಯಕ್ಕೆ ಆಧಾರ ಮತ್ತು ದೃಢತೆಯನ್ನು ಕೊಡುತ್ತದೆ.

12. ಜೀವದ್ರವ್ಯ ಆಕುಂಚನ(plasmolysis) ಎಂದರೇನು?
ಒಂದು ಸಸ್ಯದ ಜೀವಂತ ಜೀವಕೋಶವು ಅಭಿಸರಣೆ ಕ್ರಿಯೆಯಿಂದಾಗಿ ನೀರಿನಂಶವನ್ನು ಕಳೆದುಕೊಂಡಾಗ ಆದರ ಘಟಕಗಳು ಸಂಕುಚಿಸಿ, ಕೋಶಭಿತ್ತಿಯಿಂದ ದೂರ ಸರಿಯುತ್ತವೆ.ಈ ವಿದ್ಯಮಾನವನ್ನು ಜೀವದ್ರವ್ಯ ಆಕುಂಚನ(plasinolysis) ಎನ್ನುವರು.
ಕೇವಲ ಜೀವಂತ ಕೋಶಗಳು ಮಾತ್ರ ಅಭಿಸರಣ ಕ್ರಿಯೆಯಿಂದ ನೀರನ್ನು ಹೀರಿಕೊಳ್ಳುತ್ತವೆ.

13. ಸಸ್ಯಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟಿರಿಯಾಗಳ ಕೋಶಭಿತ್ತಿಯು ಅತಿಕಡಿಮೆ ಸಾರತ ಇರುವ ದ್ರವ ಮಾಧ್ಯಮದಲ್ಲಿ ಛಿದ್ರವಾಗದೆ ಉಳಿಯಬಲ್ಲದು.ಕಾರಣ ಕೊಡಿ.
ಆತೀ ಕಡಿಮೆ ಸಾರತೆ ಇರುವ ದ್ರವ ಮಾಧ್ಯಮದಲ್ಲಿ ಜೀವಕೋಶಗಳು ಆಭಿಸರಣ ಕ್ರಿಯೆಯಿಂದ ನೀರನ್ನು ಹೀರಿಕೊಳ್ಳುವ ಒಲವು ತೋರುತ್ತವೆ. ಕೋಶಭಿತ್ತಿಯಿಂದ ಏರ್ಪಡುವ ಒತ್ತಡವನ್ನು ವಿರೋಧಿಸಿ ಜೀವಕೋಶಗಳು ಉಬ್ಬುತ್ತವೆ. ಉದ್ದಿದ ಕೋಶಗಳ ವಿರುದ್ಧ ಸಮನಾದ ಒತ್ತಡವನ್ನು ಕೋಶಭಿತ್ತಿ ಹೇರುತ್ತದೆ. ಪ್ರಾಣಿ ಜೀವಕೋಶಗಳಿಗೆ ಹೋಲಿಸಿದರೆ ಕೋಶಭಿತ್ತಿಯಿಂದಾಗಿ ಇಂತಹ ಜೀವಕೋಶಗಳು ತಮ್ಮ ಸುತ್ತಲಿನ ಮಾಧ್ಯಮದಲ್ಲಿ ಉಂಟಾಗುವ ಅತಿ ಹೆಚ್ಚಿನ ಬದಲಾವಣೆಗಳನ್ನು ತಡೆದುಕೊಳ್ಳಬಲ್ಲವು.
 
14. ಕೋಶಕೇಂದ್ರದ ರಚನೆ ಮತ್ತು ಕಾರ್ಯವನ್ನು ವಿವರಿಸಿ.

ಕೋಶಕೇಂದ್ರ ಪೊರೆ (ನ್ಯೂಕ್ಲಿಯಾರ್ಮೆಂಬ್ರೇನ್)/(nuclear membrane) ಎಂಬ ಎರಡು ಪದರದ ಪೊರೆಯನ್ನು ಹೊಂದಿದೆ.
ನ್ಯೂಕ್ಲಿಯಾರ್ ಮೆಂಬ್ರೇನ್ ರಂಧ್ರಗಳನ್ನು ಹೊಂದಿದ್ದು ಇದರ ಮೂಲಕ ವಸ್ತುಗಳು ನ್ಯೂಕ್ಲಿಯಸ್ನ ಒಳಭಾಗದಿಂದ ಹೊರಭಾಗಕ್ಕೆ ಅಂದರೆ ಕೋಶದ್ರವ್ಯಸ್ಥೆ ವರ್ಗಾವಣೆಗೊಳ್ಳುತ್ತದೆ.
ನ್ಯೂಕ್ಲಿಯಸ್ ಕ್ರೋಮೋಸೋಮ್ಗಳನ್ನು ಹೊಂದಿದೆ.
ಕೋಶವಿಭಜನೆಯ ಸಮಯದಲ್ಲಿ ಮಾತ್ರ ಕ್ರೋಮೋಸೋಮ್ಗಳು ದಂಡಾಕಾರದ ರಚನೆಗಳಾಗಿ ಗೋಚರಿಸುತ್ತವೆ.
ಕ್ರೋಮೋಸೋಮ್ಗಳು ತಂದೆತಾಯಿಗಳಿಂದ ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳುವ ಆನುವಂಶೀಯ ಗುಣಗಳನ್ನು ಡಿ.ಎನ್.ಎ (ಡಿಆಕ್ಸಿರೈಬೋ ನ್ಯೂಕ್ಲಿಕ್ ಆಮ್ಲ) ಅಣುಗಳ ರೂಪದಲ್ಲಿ ಹೊಂದಿರುತ್ತವೆ.
ಕ್ರೋಮೋಸೋಮ್ಗಳು ಡಿ.ಎನ್.ಎ ಮತ್ತು ಪ್ರೋಟೀನ್ಗಳ ಸಂಯೋಜನೆಯಿಂದ ಉಂಟಾಗಿವೆ, ಜೀವಕೋಶದ ನಿರ್ಮಾಣ ಮತ್ತು ಸಂಘಟಿಸುವಿಕೆಗೆ ಬೇಕಾದ ಮಾಹಿತಿಯನ್ನು ಡಿ.ಎನ್.ಎ ಆಣುಗಳು ಹೊಂದಿರುತ್ತವೆ,
ಡಿ.ಎನ್.ಎ ಅಣುವಿನ ಕ್ರಿಯಾಶೀಲ ಭಾಗಗಳನ್ನು ಜೀನ್ಗಳು ಎನ್ನುವರು.
ವಿಭಜನೆಯ ಸ್ಥಿತಿಯಲ್ಲಿರದ ಜೀವಕೋಶದಲ್ಲಿ ಈ ಡಿ.ಎನ್.ಎ ಕ್ರೋಮ್ಯಾಟಿನ್ ವಸ್ತುವಿನ ಭಾಗವಾಗಿರುತ್ತದೆ. ಕ್ರೋಮ್ಯಾಟಿನ್ ವಸ್ತುವು ಪರಸ್ಪರ ಹೆಣೆದುಕೊಂಡಿರುವ ದಾರದ ಎಳೆಗಳ ರಚನೆಯಂತೆ ಕಾಣುತ್ತದೆ. ಜೀವಕೋಶ ವಿಭಜನೆಯ ಸಂದರ್ಭದಲ್ಲಿ ಕ್ರೋಮ್ಯಾಟಿನ್ ವಸ್ತುವು ಕ್ರೋಮೋಸೋಮ್ಗಳಾಗಿ ಪರಿವರ್ತನೆ ಹೊಂದುತ್ತವೆ.
ಒಂದು ಪ್ರೌಢ ಜೀವಕೋಶವು ವಿಭಜನೆ ಹೊಂದಿ ಎರಡು ಹೊಸ ಜೀವಕೋಶಗಳಾಗುವ ಪ್ರಕ್ರಿಯೆಯಲ್ಲಿ ನ್ಯೂಕ್ಲಿಯಸ್ ಪ್ರಧಾನ ಪಾತ್ರವಹಿಸುತ್ತದೆ.
ಜೀವಕೋಶದ ರಾಸಾಯನಿಕ ಚಟುವಟಿಕೆಗಳನ್ನು ನಿರ್ದೇಶಿಸುವ ಮೂಲಕ ಜೀವಕೋಶದ ಬೆಳವಣಿಗೆಯ ಹಂತ ಮತ್ತು ಪ್ರೌಢಾವಸ್ಥೆಯಲ್ಲಿ ಜೀವಕೋಶವು ಯಾವ ರೂಪವನ್ನು ಪ್ರದರ್ಶಿಸಬೇಕು ಎನ್ನುವುದರ ಬಗ್ಗೆ ನಿರ್ಣಾಯಕ ಪಾತ್ರ ವಹಿಸುತ್ತದೆ.

15. ಪ್ರೊಕ್ಯಾರಿಯೋಟ್ ಜೀವಕೋಶ ಗಳೆಂದರೇನು?
ನ್ಯೂಕ್ಲಿಯಾರ್ ಪೊರೆ ಇಲ್ಲದ ಜೀವಕೋಶವನ್ನು ಹೊಂದಿರುವಂತಹ ಜೀವಿಗಳನ್ನು ಪ್ರೊಕ್ಯಾರಿಯೋಟ್ಗಳು ಎನ್ನುವರು. ಉದಾ: ಬ್ಯಾಕ್ಟಿರಿಯಾ
 

ನ್ಯೂಕ್ಲಿಕ್ ಆಮ್ಲ ಮಾತ್ರ ಇರುವ ಅಸ್ಪಷ್ಟ ನ್ಯೂಕ್ಲಿಯಾರ್ ಪ್ರದೇಶವನ್ನು ನ್ಯೂಕ್ಲಿಯಾಯ್ಡ್ (nucleoid) ಎಂದು ಕರೆಯುವರು.

16. ಯೂಕ್ಯಾರಿಯೋಟ್ ಜೀವಕೋಶಗಳೆಂದರೇನು?
ನ್ಯೂಕ್ಲಿಯಾರ್ ಮೊರೆ ಇರುವ ಜೀವಕೋಶವನ್ನು ಹೊಂದಿರುವ ಜೀವಿಗಳಿಗೆ ಯೂಕ್ಯಾರಿಯೋಟ್ಗಳು ಎನ್ನುವರು.
ಉದಾ: ಅಮೀಬಾ ಸಸ್ಯಗಳು,ಪ್ರಾಣಿಗಳು,ಇತ್ಯಾದಿ.
 

ಯೂಕ್ಯಾರಿಯೋಟ್ ಜೀವಕೋಶ
ಯೂಕ್ಯಾರಿಯೋಟಿಕ್ ಜೀವಕೋಶಗಳ ಕೋಶದ್ರವ್ಯದಲ್ಲಿ ಕಂಡುಬರುವ ಬಹುತೇಕ ಕಣದಂಗಗಳು ಪ್ರೊಕ್ಯಾರಿಯೋಟಿಕ್ ಜೀವಕೋಶಗಳಲ್ಲಿ ಇರುವುದಿಲ್ಲ.
ದ್ಯುತಿ ಸಂಶ್ಲೇಷಣೆ (photosynthesis) ನಡೆಸುವ ಪ್ರೊಕ್ಯಾರಿಯೋಟಿಕ್ ಬ್ಯಾಕ್ಟಿರಿಯಗಳು ಸೂಕ್ಷ್ಮ ಪೊರೆಯಿಂದಾದ ಚೀಲಗಳಂತಹ ರಚನೆಗಳಲ್ಲಿ ಪತ್ರಹರಿತ್ತನ್ನು ಒಳಗೊಂಡಿದ್ದರೆ, ಯೂಕ್ಯಾರಿಯೋಟಿಕ್ ಜೀವಕೋಶಗಳು ಪ್ಲಾಸ್ಟಿಡ್ಗಳಲ್ಲಿ ಪತ್ರಹರಿತ್ತನ್ನು ಹೊಂದಿವೆ.

17) ತಮ್ಮದೇ ಆದ ಅನುವಂಶೀಯ ವಸ್ತುವನ್ನು ಹೊಂದಿರುವ ಎರಡು ಕಣದಂಗಗಳನ್ನು ನೀವು ಹೆಸರಿಸಬಲ್ಲಿರಾ?
ತಮ್ಮದೇ ಆದ ಆನುವಂಶೀಯ ವಸ್ತುವನ್ನು ಹೊಂದಿರುವ ಎರಡು ಕಣದಂಗಗಳು-1. ಮೈಟೋಕಾಂಡ್ರಿಯ ಮತ್ತು ಪ್ಲಾಸ್ಟಿಡ್ಗಳು
2) ಕೆಲವು ಭೌತಿಕ ಅಥವಾ ರಾಸಾಯನಿಕ ಪ್ರಭಾವದಿಂದಾಗಿ ಒಂದು ಜೀವಕೋಶದ ಕೋಶೀಯ ವ್ಯವಸ್ಥೆಯು ನಾಶವಾದರೆ ಏನಾಗಬಹುದು?
ಜೀವಕೋಶವು ಜೀವಿಯ ಮೂಲ ಘಟಕವಾಗಿದ್ದು, ಜೀವಿಯ ಮೂಲ ಕ್ರಿಯೆಗಳನ್ನು ನಡೆಸುವ ಸಾಮರ್ಥ್ಯ ಹೊಂದಿವೆ. ಕೆಲವು ಭೌತಿಕ ಅಥವಾ ರಾಸಾಯನಿಕ ಪ್ರಭಾವದಿಂದಾಗಿ ಒಂದು ಜೀವಕೋಶದ ಕೋಶೀಯ ವ್ಯವಸ್ಥೆಯು ನಾಶವಾದರೆ ಮೂಲ ಕ್ರಿಯೆಗಳಾದ ಉಸಿರಾಟ,ಮೋಷಣೆ, ವಿಸರ್ಜನೆ ಇತ್ಯಾದಿಗಳನ್ನು ನಡೆಸುವ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.
3) ಲೈಸೋಸೋಮ್ಗಳನ್ನು ಜೀವಕೋಶದ ಆತ್ಮಹತ್ಯಾಚೀಲಗಳೆಂದು ಕರೆಯಲು ಕಾರಣವೇನು?
ಲೈಸೋಸೋಮ್ಗಳಲ್ಲಿ ಪ್ರಬಲ ಜೀರ್ಣಕಾರಕ ಕಿಣ್ಣಗಳಿದ್ದು, ಅವು ಎಲ್ಲಾ ಸಾವಯವ ಪದಾರ್ಥಗಳನ್ನು ವಿಭಜಿಸುವಸಾಮರ್ಥ್ಯ ಹೊಂದಿವೆ.
ಕೋಶೀಯ ಚಯಾಪಚಯ ಕ್ರಿಯೆಗೆ ತೊಂದರೆಯಾದ ಸಮಯದಲ್ಲಿ ಅಥವಾ ಜೀವಕೋಶವು ತೀವ್ರವಾಗಿ ಹಾನಿಗೊಳಗಾದ ಸಂದರ್ಭದಲ್ಲಿ ಲೈಸೋಸೋಮ್ಗಳು ಒಡೆದು ಹೋಗಿ ಕಿಣ್ವಗಳು ತಮ್ಮದೇ ಕೋಶವನ್ನು ಜೀರ್ಣಿಸುತ್ತವೆ, ಆದ್ದರಿಂದ ಲೈಸೋಸೋಮ್ಗಳನ್ನು ಜೀವಕೋಶದ ‘ಆತ್ಮಹತ್ಯಾ ಸಂಚಿಗಳು’ ಎಂದೂ ಕರೆಯುತ್ತಾರೆ.
4) ಪ್ರೋಟೀನ್ಗಳ ಸಂಶ್ಲೇಷಣೆಯು ಜೀವಕೋಶದ ಯಾವ ಭಾಗದಲ್ಲಿ ಆಗುತ್ತದೆ?
ರೈಬೋಸೋಮ್ಗಳು ಎಲ್ಲಾ ಕ್ರಿಯಾಶೀಲ ಜೀವಕೋಶಗಳಲ್ಲಿದ್ದು ಪ್ರೋಟೀನ್ ಉತ್ಪಾದನೆಯ ಸ್ಥಳಗಳಾಗಿವೆ.

ಅಭ್ಯಾಸಗಳು

1. ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶಗಳನ್ನು ಹೋಲಿಸಿ ಮತ್ತು ಅವು ಯಾವ ವಿಧಗಳಲ್ಲಿ ಪರಸ್ಪರ ಭಿನ್ನವಾಗಿವೆ?
•    ಸಸ್ಯ ಜೀವಕೋಶಗಳು ಸಾಮಾನ್ಯವಾಗಿ ಗಾತ್ರದಲ್ಲಿ ಪ್ರಾಣಿ’ ಜೀವಕೋಶಗಳಿಗಿಂತ ದೊಡ್ಡದಾಗಿರುತ್ತದೆ.
•    ಸಸ್ಯ ಜೀವಕೋಶಗಳು ಕೋಶಭಿತ್ತಿ ಹೊಂದಿವೆ ಆದರೆ ಪ್ರಾಣಿ ಜೀವಕೋಶಗಳಲ್ಲಿ ಕೋಶಭಿತ್ತಿ ಕಂಡು ಬರುವುದಿಲ್ಲ.
•    ಸಸ್ಯ ಜೀವಕೋಶಗಳಲ್ಲಿ ಕ್ಲೋರೋಪ್ಲಾಸ್ಟ್ ಕಂಡು ಬರುತ್ತದೆ ಆದರೆ ಪ್ರಾಣಿ ಜೀವಕೋಶಗಳಲ್ಲಿ ಕ್ಲೋರೋಪ್ಲಾಸ್ಟ್ ಕಂಡು ಬರುವುದಿಲ್ಲ.
•    ಪ್ರಾಣಿ ಜೀವಕೋಶದಲ್ಲಿ ಕಂಡುಬರುವ ರಸದಾನಿಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ.ಆದರೆ ಸಸ್ಯ ಜೀವಕೋಶದಲ್ಲಿ ಅತಿ ದೊಡ್ಡ ರಸದಾನಿಗಳು ಕಂಡುಬರುತ್ತವೆ.

2. ಪ್ರೊಕ್ಯಾರಿಯೋಟ್ ಜೀವಕೋಶವು ಯೂಕ್ಯಾರಿಯೋ ಜೀವಕೋಶಕ್ಕಿಂತ ಹೇಗೆ ಭಿನ್ನವಾಗಿದೆ?
 

3. ಕೋಶಪೊರೆಯು ಛಿದ್ರವಾದರೆ ಅಥವಾ ಮುರಿದುಹೋದರೆ ಏನಾಗಬಹುದು?
ಕೋಶಪೊರೆಯು ಛಿದ್ರವಾದರೆ ಅಥವಾ ಮುರಿದುಹೋದರೆ ಜೀವಕೋಶವೇ ಸಾಯಬಹುದು (ನಾಶವಾಗಬಹುದು).ಏಕೆಂದರೆ ಕೋಶಪೊರೆಯು ವಸ್ತುಗಳನ್ನು ಜೀವಕೋಶದ ಒಳಗೆ ಮತ್ತು ಹೊರಗೆ ವಿಸರಣೆ ಮತ್ತು ಅಭಿಸರಣೆ ಪ್ರಕ್ರಿಯೆಯ ಮೂಲಕ ಸಾಗಾಣಿಕೆಗೆ ನೆರವು ನೀಡುತ್ತದೆ .
ಕೋಶಪೊರೆಯು ಛಿದ್ರವಾದರೆ ಜೀವಕೋಶದ ಒಳಗಿನ ವಸ್ತುಗಳೆಲ್ಲ ಹೊರಗೆ ಸೋರಿಕೆಯಾಗುತ್ತವೆ.

4. ಗಾಲ್ಗಿ ಸಂಕೀರ್ಣ ಇಲ್ಲದಿದ್ದರೆ ಕೋಶದ ಜೀವಕ್ಕೆ ಉಂಟಾಗಬಹುದಾದ ತೊಂದರೆಗಳೇನು?
ವಸ್ತುಗಳ ಸಂಗ್ರಹಣೆ, ಸುಧಾರಣೆ ಮತ್ತು ಪ್ಯಾಕ್ ಮಾಡುವಿಕೆ ಉಂಟಾಗುವುದಿಲ್ಲ.
ಕೆಲವು ಸಂದರ್ಭಗಳಲ್ಲಿ ಸರಳ ಸಕ್ಕರೆಯ ಅಣುಗಳಿಂದ ಸಂಕೀರ್ಣ ಸಕ್ಕರೆಯ ಆಣುಗಳು ಗಾಲ್ಟಿ ಸಂಕೀರ್ಣದಲ್ಲಿ ಉಂಟಾಗದಿರಬಹುದು.
ಗಾಲಿ ಸಂಕೀರ್ಣವು ಲೈಸೋಸೋಮ್ಗಳ ನಿರ್ಮಾಣದಲ್ಲೂ ಭಾಗವಹಿಸುತ್ತದೆ.ಆದ್ದರಿಂದ ಲೆಸೋಸೋಮ್ಗಳು ನಿರ್ಮಾಣವಾಗದಿರಬಹುದು.

5. ಯಾವ ಕಣದಂಗವು ಕೋಶದ ಶಕ್ತಿಕೇಂದ್ರ ಎಂದು ಹೆಸರಾಗಿದೆ?ಏಕೆ?
ಮೈಟೋಕಾಂಡ್ರಿಯಾ ಜೀವಕೋಶದ ಶಕ್ತಿ ಕೇಂದ್ರವೆಂದು ಹೆಸರಾಗಿದೆ.
ಏಕೆಂದರೆ ಜೀವದ ಉಳಿಯುವಿಕೆಗೆ ಅಗತ್ಯವಾದ ಅನೇಕ ರಾಸಾಯನಿಕ ಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿಯನ್ನು ಮೈಟೋಕಾಂಡ್ರಿಯಾವು ಎ.ಟಿ.ಪಿ (ಆಡಿನೋಸಿನ್ ಟೈಪಾಸ್ಟೇಟ್) ಆಣುವಿನ ರೂಪದಲ್ಲಿ ಬಿಡುಗಡೆ ಮಾಡುತ್ತದೆ.

6. ಕೋಶದೊರೆಯ ನಿರ್ಮಾಣದಲ್ಲಿ ಭಾಗಿಯಾಗುವ ಲಿಪಿಡ್ಗಳು ಮತ್ತು ಪ್ರೋಟೀನ್ಗಳು ಎಲ್ಲಿ ಸಂಶ್ಲೇಷಿಸಲ್ಪಡುತ್ತವೆ?
ಕೋಶಪೊರೆಯ ನಿರ್ಮಾಣದಲ್ಲಿ ಭಾಗಿಯಾಗುವ ಲಿಪಿಡ್ಗಳು ಮತ್ತು ಪ್ರೋಟೀನ್ಗಳು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ನಲ್ಲಿ ಸಂಶ್ಲೇಷಿಸಲ್ಪಡುತ್ತವೆ.

7. ಅಮೀಬಾವು ತನ್ನ ಆಹಾರವನ್ನು ಹೇಗೆ ಪಡೆಯುತ್ತದೆ?
ಕೋಶಪೊರೆಯ ನಮ್ಯತೆಯಿಂದಾಗಿ ಜೀವಕೋಶವು ತನ್ನ ಹೊರಗಿನ ಪರಿಸರದಿಂದ ಆಹಾರ ಮತ್ತು ಇತರ ವಸ್ತುಗಳನ್ನು ತನ್ನೊಳಗೆ ತೆಗೆದುಕೊಳ್ಳಲು ಸಾಧ್ಯವಾಗಿದೆ. ಈ ಪ್ರಕ್ರಿಯೆಯನ್ನು ಎಂಡೋಸೈಟೋಸಿಸ್ ಎನ್ನುವರು. ಈ ವಿಧಾನದಿಂದ ಅಮೀಬಾವು ತನ್ನ ಆಹಾರವನ್ನು ಪಡೆಯುತ್ತದೆ.

8. ಅಭಿಸರಣೆ ಎಂದರೇನು?
ನೀರಿನ ಅಣುಗಳು ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಆರವ್ಯಾಪ್ಯ ಮೊರೆಯ ಮೂಲಕ ಹಾದು ಹೋಗುವ ಕ್ರಿಯೆಯನ್ನು ಅಭಿಸರಣೆ ಎನ್ನುವರು.

9. ಈ ಕೆಳಗಿನ ಅಭಿಸರಣೆ ಪ್ರಯೋಗವನ್ನು ಕೈಗೊಳ್ಳಿ, ಸಿಪ್ಪೆ ಸುಲಿದ ಆಲೂಗಡ್ಡೆಯ ನಾಲ್ಕು ಅರ್ಧ ತುಂಡುಗಳನ್ನು ತೆಗೆದುಕೊಳ್ಳಿ ಮತ್ತು ಪ್ರತಿ ತುಂಡಿನಲ್ಲೂ ಬಟ್ಟಲಿನಾಕಾರದ ಕುಳಿ ಮಾಡಿ. ಇವುಗಳಲ್ಲಿ ಒಂದು ಆಲೂಗಡ್ಡೆಯ ಬಟ್ಟಲನ್ನು ಬೇಯಿಸಿದ ಆಲೂಗಡ್ಡೆಯಿಂದ ಮಾಡಿಕೊಳ್ಳಿ ಆವುಗಳನ್ನು A,B, C ಮತ್ತು D ಎಂದು ಗುರುತಿಸಿ ಪ್ರತಿಯೊಂದು ಆಲೂಗಡ್ಡೆಯನ್ನು ನೀರು ತುಂಬಿದ ಗಾಜಿನ ತೊಟ್ಟಿಯಲ್ಲಿ ಇಡಿ ಈಗ,
a) A ಎಂದು ಗುರುತಿಸಿದ ಆಲೂಗಡ್ಡೆ ಬಟ್ಟಲನ್ನು ಖಾಲಿ ಇಡಿ,
b) B ಎಂದು ಗುರುತಿಸಿದ ಆಲೂಗಡ್ಡೆ ಬಟ್ಟಲಿನಲ್ಲಿ ಒಂದು ಟೀ ಚಮಚೆಯಷ್ಟು ಸಕ್ಕರೆ ಹಾಕಿ.
C) C ಎಂದು ಗುರುತಿಸಿದ ಆಲೂಗಡ್ಡೆ ಬಟ್ಟಲಿನಲ್ಲಿ ಒಂದು ಟೀ ಚಮಚೆಯಷ್ಟು ಉಪ್ಪು ಹಾಕಿ,
d) D ಎಂದು ಗುರುತಿಸಿದ ಬೇಯಿಸಿದ ಆಲೂಗಡ್ಡೆ ಬಟ್ಟಲಿನಲ್ಲಿ ಒಂದು ಟೀ ಚಮಚೆಯಷ್ಟು ಸಕ್ಕರೆಯನ್ನು ಹಾಕಿ. ಇವೆಲ್ಲವನ್ನೂ ಎರಡು ಗಂಟೆಗಳಷ್ಟು ಕಾಲ ಹಾಗೆಯೇ ಇಡಿ, ನಂತರ ನಾಲ್ಕೂ ಆಲೂಗಡ್ಡೆ ಬಟ್ಟಲುಗಳನ್ನು ಗಮನಿಸಿ ಮತ್ತು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,
i). B ಮತ್ತು C ಆಲೂಗಡ್ಡೆ ಬಟ್ಟಲಿನ ಕುಳಿಗಳಲ್ಲಿ ನೀರು ಏಕೆ ಸಂಗ್ರಹವಾಗುತ್ತದೆ ಎಂದು ವಿವರಿಸಿ.
B ಮತ್ತು C ಆಲೂಗಡ್ಡೆ ಬಟ್ಟಲಿನ ಕುಳಿಗಳಲ್ಲಿ ನೀರು ಸಂಗ್ರಹವಾಗುತ್ತದೆ. ಏಕೆಂದರೆ ಅಭಿಸರಣೆಯಿಂದಾಗಿ ನೀರು ಆಲೂಗಡ್ಡೆ ಒಳಗೆ ಬರುತ್ತದೆ.
ii). A ಎಂದು ಗುರುತಿಸಿದ ಆಲೂಗಡ್ಡೆ ಬಟ್ಟಲು ಈ ಪ್ರಯೋಗಕ್ಕೆ ಏಕೆ ಅವಶ್ಯಕ?
A ಎಂದು ಗುರುತಿಸಿದ ಆಲೂಗಡ್ಡೆ ಬಟ್ಟಲು ಈ ಪ್ರಯೋಗಕ್ಕೆ ಆವಶ್ಯಕ ಏಕೆಂದರೆ ಪ್ರಯೋಗವನ್ನು ನಿರ್ವಹಿಸಲು ಕ್ರಮಬದ್ಧವಾದ ಜೋಡಣೆ ಕೈಗೊಳ್ಳಲು ಸಾಧ್ಯ.
ii), A ಮತ್ತು D ಆಲೂಗಡ್ಡೆ ಬಟ್ಟಲಿನ ಕುಳಿಗಳಲ್ಲಿ ನೀರು ಏಕೆ ಸಂಗ್ರಹವಾಗುವುದಿಲ್ಲ?
A ಎಂದು ಗುರುತಿಸಿದ ಆಲೂಗಡ್ಡೆ ಬಟ್ಟಲು ಖಾಲಿ ಇರುವುದರಿಂದ ಅಭಿಸರಣೆ ನಡೆಯದೆ ನೀರು ಸಂಗ್ರಹವಾಗುವುದಿಲ್ಲ.
D ಎಂದು ಗುರುತಿಸಿದ ಬೇಯಿಸಿದ ಆಲೂಗಡ್ಡೆ ಬಟ್ಟಲಿನಲ್ಲಿ ನೀರು ಸಂಗ್ರಹವಾಗುವುದಿಲ್ಲ ಏಕೆಂದರೆ ಬೇಯಿಸಿದ ಆಲೂಗಡ್ಡೆಯಲ್ಲಿನ ಕೋಶಪೊರೆ ಹಾಳಾಗಿದ್ದು ಅಭಿಸರಣೆ ಪ್ರಕ್ರಿಯೆ ಸರಿಯಾಗಿ ಜರುಗುವುದಿಲ್ಲ.


You Might Like

Post a Comment

0 Comments